ಭರತ್ ಬೋಪಣ್ಣ (ಜನನ: ೭ ಸೆಪ್ಟೆಂಬರ್ ೧೯೯೨) ಕನ್ನಡ ಚಿತ್ರರಂಗದ ಭಾರತೀಯ ರೂಪದರ್ಶಿ ಮತ್ತು ಚಲನಚಿತ್ರ ನಟ. ಇವರು ಸ್ಪರ್ಶ ರೇಖಾ ರವರು ನಿರ್ಮಿಸಿದ ‘ಡೆಮೊ ಪೀಸ್’ ಎಂಬ ಕನ್ನಡ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. == ಜನನ == ಭರತ್ ರವರು ಜನಿಸಿದ್ದು ೭ ಸೆಪ್ಟೆಂಬರ್ ೧೯೯೨ ರಂದು. ಇವರು ಕರ್ನಾಟಕದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ಕೊಡವ ಮಾತನಾಡುವ ಸಮುದಾಯದಲ್ಲಿ ಜನಿಸಿದರು. == ವೃತ್ತಿಜೀವನ == === ಆರಂಭಿಕ ದಿನಗಳು === ಅವರ ಶಾಲಾ ದಿನಗಳಲ್ಲಿ ಅವರು ವಾಲಿಬಾಲ್ ಮತ್ತು ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಂಟ್ವಾಳ ತಾಲೂಕನ್ನು ಪ್ರತಿನಿಧಿಸಿದರು. ಇವರು ೨೦೧೪ ರಲ್ಲಿ ಫ್ರೀಲ್ಯಾನ್ಸರ್ ಮಾದರಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಆದಿತ್ಯ ಬಿರ್ಲಾ ಮಿನಾಕ್ಸ್ ಕಂಪನಿಗೆ ಬಿಪಿಒ ನ ರೂಪದಲ್ಲಿ ಕೆಲಸ ಮಾಡುತ್ತಿದ್ದರು. ತದನಂತರ ಕ್ಯಾಪ್‌ಜೆಮಿನಿಯಲ್ಲಿ ಸೈಬರ್ ಸೆಕ್ಯೂರಿಟಿ ಅನಲಿಸ್ಟ್ ಆಗಿ ಕಾರ್ಯನಿರ್ವಹಿಸಿದರು. === ೨೦೧೬ ರಿಂದ ಇಂದಿನವರೆಗೆ === ೨೦೧೬ ರಲ್ಲಿ ಭರತ್ ಇವರು ಕಿರುತೆರೆಗೆ "ರಾಜವರ್ಧನ" ಎಂಬ ಪಾತ್ರವನ್ನಾಧಾರಿಸಿ , ನವೀನ್ ಕೃಷ್ಣ ನಿರ್ದೇಶನದ ಮತ್ತು ಅರ್ಕಾ ಮೀಡಿಯಾ ವರ್ಕ್ಸ್ ನಿರ್ಮಿಸಿದ ಬಾಹುಬಲಿ: ದಿ ಬಿಗಿನಿಂಗ್ ಮತ್ತು ಬಾಹುಬಲಿ 2: ದಿ ಕನ್‌ಕ್ಲೂಷನ್ , ಸಾಮಾಜಿಕ-ಪೌರಾಣಿಕ ಕನ್ನಡ ಧಾರಾವಾಹಿ ಗಿರಿಜಾ ಕಲ್ಯಾಣದಲ್ಲಿ ನಟಿಸುವ ಮೂಲಕ ತಮ್ಮ ನಟನಾ ಜೀವನಕ್ಕೆ ಪಾದಾರ್ಪಣೆ ಮಾಡಿದರು . ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಎಂಬ ಜನಪ್ರಿಯ ಕನ್ನಡ ಧಾರಾವಾಹಿಯಲ್ಲಿ ಕಿರು ಪಾತ್ರದಲ್ಲಿ ಕಾಣಿಸಿಕೊಂಡರು .ಜೀ ಟಿವಿಯ ಬ್ರಹ್ಮಗಂಟು ಎಂಬ ಧಾರವಾಹಿಯಲ್ಲಿ ಕಬಡ್ಡಿ ಚಾಂಪಿಯನ್ ಆಗಿ "ಲಕ್ಕಿ" ಎಂಬ ಮುಖ್ಯ ಪಾತ್ರವನ್ನು ನಿರ್ವಹಿಸುವುದಕ್ಕಾಗಿ ಇವರು ಜನಪ್ರಿಯರಾಗಿದ್ದಾರೆ. ಸ್ಟಾರ್ ಮಾದಲ್ಲಿ ಪ್ರಸಾರವಾಗುತ್ತಿದ್ದ "ಜ್ಯೋತಿ" ಎಂಬ ತೆಲುಗು ಧಾರಾವಾಹಿಯಲ್ಲಿ ಇವರು "ರಾಕಿ" ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾದ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ಎಂಬ ಪ್ರಸಿದ್ಧ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಇವರು ಭಾಗವಹಿಸಿದ್ದರು. ಸ್ಪರ್ಶ ರೇಖಾ ರವರು ನಿರ್ಮಿಸಿದ "ಡೆಮೊ ಪೀಸ್" ಎಂಬ ಕನ್ನಡ ಚಿತ್ರದ ಮೂಲಕ ಇವರು ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು. == ನಟಿಸಿದ ಸಿನಿಮಾಗಳು == == ದೂರದರ್ಶನ == == ಉಲ್ಲೇಖಗಳು ==